ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಮುಂದೇನು? ಇಲ್ಲಿವೆ 80+ ಕರಿಯರ್ ಆಯ್ಕೆಗಳು

What Next after puc, after sslc. Here is 80 Plus Career Option. It was very big guide containing 80 Career Articles. First Time in Kannada Blogging History, One Blog Post as 20k plus words. read and get success. ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿದ ಪರಿಚಯದ ವಿದ್ಯಾರ್ಥಿಗಳು ಪ್ರತಿವರ್ಷ ಕರೆ ಮಾಡಿ “ಯಾವ ಕೋರ್ಸ್ ಮಾಡಬೇಕು”, “ಯಾವುದನ್ನು ಓದಿದರೆ ಯಾವ ಉದ್ಯೋಗ ದೊರಕುತ್ತದೆ?”. “ಜಿಲ್ಲಾಧಿಕಾರಿಯಾಗುವುದು ಹೇಗೆ?”, “ಹಡಗಿನ ಪೈಲೆಟ್ ಆಗುವುದು ಹೇಗೆ?”, “ವಿಮಾನದ ಪೈಲೆಟ್ ಆಗಬೇಕಾದರೆ ಏನು ಓದಬೇಕು”, “ಪಶುವೈದ್ಯರಾಗುವುದು ಹೇಗೆ?”, ಹೀಗೆ ಹಲವು ಉದ್ಯೋಗಗಳ ಮಾಹಿತಿಯನ್ನು ಪಡೆಯುತ್ತಿದ್ದರು. ಮುಂದೆ ಏನು ಓದಬೇಕು? ಯಾವುದನ್ನು ಓದಿದರೆ ಯಾವ ಉದ್ಯೋಗ ದೊರಕುತ್ತದೆ? ಯಾವ ಉದ್ಯೋಗ ಪಡೆಯಲು ಯಾವ ರೀತಿಯ ಕೌಶಲ ಪಡೆಯಬೇಕು? ಎಂಬ ಪ್ರಶ್ನೆ ಈಗಿನ ವಿದ್ಯಾರ್ಥಿಗಳದ್ದು ಮತ್ತು ಅವರ ಹೆತ್ತವರದ್ದು.

ಮುಖ್ಯವಾಗಿ ಗ್ರಾಮೀಣ ಜನರಿಗೆ ಶಿಕ್ಷಣ-ಕರಿಯರ್ ಕುರಿತಾಗಿ ಸರಿಯಾದ ಮಾಹಿತಿ ದೊರಕಿರುವುದಿಲ್ಲ. ಈಗಾಗಲೇ ಗೊತ್ತಿರುವ ಒಂದಿಷ್ಟು ಉದ್ಯೋಗಗಳ ಹಿಂದೆಯೇ ಸಾಗುತ್ತಾರೆ. ಡಾಕ್ಟರ್, ಎಂಜಿನಿಯರ್, ಟೀಚರ್, ನರ್ಸ್.. ಹೀಗೆ ಕೆಲವೇ ಉದ್ಯೋಗಗಳು ಬಹುತೇಕರ ಆಯ್ಕೆಯಾಗುತ್ತದೆ. ಕಾಲೇಜುಗಳು ತಮ್ಮಲ್ಲಿರುವ ಕೋರ್ಸ್‍ಗಳಿಗೆ ವಿಶೇಷ ಪ್ರಚಾರ ನೀಡಿ “ಇದನ್ನು” ಕಲಿತರೆ ಉದ್ಯೋಗ ಖಾತ್ರಿ ಎಂಬ ಭ್ರಮೆಯನ್ನು ಸೃಷ್ಟಿಸುತ್ತವೆ. ಶಿಕ್ಷಣ ಮುಗಿಸಿ ಹೊರಗೆ ಬಂದ ನಂತರ “ಉದ್ಯೋಗ ದೊರಕದೆ ಇದ್ದಾಗ” ವಿದ್ಯಾರ್ಥಿಗಳಿಗೆ ನಿಜವಾದ ಕಷ್ಟವೇನೆಂದು ಗೊತ್ತಾಗುತ್ತದೆ.

ನೀವು ಎಸ್‍ಎಸ್‍ಎಲ್‍ಸಿ ಅಥವಾ ಪಿಯುಸಿ ಅಥವಾ ಕಾಲೇಜು ಮುಗಿಸಿದ ಬಳಿಕ ಮುಂದೆ ಏನಾಗಬೇಕು ಎಂಬ ಸ್ಪಷ್ಟತೆ ಹೊಂದಿರಬಹುದು ಅಥವಾ ಹೊಂದಿಲ್ಲದೆಯೂ ಇರಬಹುದು. ನನ್ನಿಂದ ಇಷ್ಟೇ ಸಾಧ್ಯ ಎಂದು ಸಣ್ಣ ಕನಸಿಗೆ ಜೋತುಬೀಳಬಹುದು. ದೊಡ್ಡ ಕನಸನ್ನು ಚಿವುಟಿಬಿಡಬಹುದು. ಆದರೆ, ನಿಮಗೆ ಗೊತ್ತೆ? ನೀವು ದೊಡ್ಡ ಕನಸು ಕಾಣಬಹುದು ಮತ್ತು ಅದನ್ನು ಈಡೇರಿಸಿಕೊಳ್ಳಬಹುದು. ಹಾಗಂತ, ಇದು ನಿಮ್ಮ ಭವಿಷ್ಯ ಬದಲಾವಣೆ ಹೇಗೆ ಎಂದು ಹೇಳುವ “ವ್ಯಕ್ತಿತ್ವ ವಿಕಸನ” ಪುಸ್ತಕವಲ್ಲ. ಮುಂದೆ ಏನು ಮಾಡಬಹುದು ಅಥವಾ ಮುಂದೆ ಏನಾಗಬೇಕು ಎಂದು ಅವಕಾಶಗಳ ಹುಡುಕಾಟದಲ್ಲಿರುವವರಿಗೆ ಇರುವ ನೂರಾರು ಆಯ್ಕೆಗಳನ್ನು ತೋರಿಸುವ ಕೈಪಿಡಿ ಅಥವಾ ದಿಕ್ಸೂಚಿ.
ಈಗಿನ ಉದ್ಯೋಗ ಜಗತ್ತು ಹಿಂದಿನಂತಿಲ್ಲ. ಕೆಲವು ವರ್ಷಗಳ ಹಿಂದೆ ಹೆಸರೇ ಕೇಳಿರದ ಹೊಸ ಬಗೆಯ ಉದ್ಯೋಗಗಳು, ಅದಕ್ಕೆ ಸಂಬಂಧಪಟ್ಟ ಕೋರ್ಸ್‍ಗಳು ಬಂದಿವೆ. ಇದರೊಂದಿಗೆ ಕೆಲವು ಉದ್ಯೋಗಗಳು ನೇಪತ್ಯಕ್ಕೆ ಸರಿದಿವೆ. ಕಾಲ ಎಷ್ಟೇ ಬದಲಾದರೂ ಕೆಲವು ಉದ್ಯೋಗಗಳು ಗಟ್ಟಿಯಾಗಿ ಉಳಿದಿವೆ. ಅಂತಹ ಬೇಡಿಕೆಯ ಕೆಲವು ಉದ್ಯೋಗಗಳನ್ನು ಹೆಕ್ಕಿ ಆ ಉದ್ಯೋಗ ಪಡೆಯಲು ಏನು ಓದಬೇಕು, ಯಾವ ರೀತಿ ಮುಂದುವರೆಯಬೇಕು ಎಂಬ ಮಾಹಿತಿಯನ್ನು ಪೋಣಿಸುವ ಕೆಲಸವನ್ನು ಇಲ್ಲಿ ಮಾಡಲಾಗಿದೆ.

Continue Reading

Related Education Articles See all Articles

line.svg